BBMP
Loading ...

ಬೆಂಗಳೂರು: ಮಲ್ಲೇಶ್ವರಂ ಹೊಯ್ಸಳ ಪೊಲೀಸರಿಂದ ರಾಜಾರೋಷವಾಗಿ ಹಫ್ತಾ ವಸೂಲಿ ಮಾಡಿದ್ದು ಇದೀಗ ಸಾಕ್ಷಿ ಸಮೇತ ದಕ್ಷ ಪೊಲೀಸರ ಬಣ್ಣ ಬಯಲಾಗಿದೆ.

ಪಾನಿಪುರಿ, ಹೋಟೆಲ್, ಬಾರ್, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಸೇರಿದಂತೆ ರಸ್ತೆಪಕ್ಕದ ಅಂಗಡಿಗಳಲ್ಲಿ ಪ್ರತಿ ದಿನ ಇಂಚ ವಸೂಲಿ ನಡೆಯುತ್ತಿರು ಫೋಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಎಕ್ಸ್ಕ್ಲೂಸಿವ್ ಮಗಾ ಎನ್ನುವ ಎಕ್ಸ್ ಖಾತೆಯಲ್ಲಿ ವಿಡಿಯೋ ಸಮೇತವಾಗಿ ನಗರ ಕಮಿಷನರ್‌ಗೆ ಟ್ವೀಟ್ ಮಾಡಲಾಗಿದೆ. ರಸ್ತೆಪಕ್ಕದ ಅಂಗಡಿಗಳಲ್ಲಿ ಪ್ರತಿ ದಿನ ಹಣ ವಸೂಲಿ. ಹಲವು ಕಡೆ ನಿಂತಿರುವ ಬೆಂಗಳೂರಿನ ದಕ್ಷ ಪೊಲೀಸರು ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.

KA02G4721 ಹೊಯ್ಸಳ ವಾಹನ ಪೋಟೋ ವಿಡಿಯೋ ಸಮೇತ ಟ್ವೀಟ್ ಮಾಡಿದ್ದು ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 35 ಡಿವೈಎಸ್​ಪಿ, 88 ಇನ್ಸ್​ಪೆಕ್ಟರ್​ಗಳ ವರ್ಗಾವಣೆ, ಇಲ್ಲಿದೆ ಲೀಸ್ಟ್​

Leave a Reply

Your email address will not be published. Required fields are marked *