ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೆಹಲಿಯ ಮಾದರಿಯ ಅಂಡರ್ಗ್ರೌಂಡ್ ಪಾಲಿಕೆ ಬಜಾರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ ಅಮೃತ ಹಸ್ತದಿಂದ ನಾಳೆ (ಆಗಸ್ಟ್ 25) ಲೋಕಾರ್ಪಣೆಗೊಳಿಸಲಿದ್ದಾರೆ.
ವಿಜಯನಗರ ಬಸ್ ನಿಲ್ದಾಣ ಬಳಿ ಈ ಪಾಲಿಕೆ ಬಜಾರ್ ನಿರ್ಮಾಣವಾಗಿದ್ದು, ನಾಳೆ ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಅವಿರತ ಪ್ರಯತ್ನದ ಫಲವಾಗಿ ಇಂದು ಈ ಪಾಲಿಕೆ ಬಜಾರ್ ವಿಜಯನಗರದಲ್ಲಿ ತಲೆಯೆತ್ತಿ ನಿಂತಿದೆ. ಇದು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ನೆಲಮಾಳಿಗೆಯಲ್ಲಿ ನೂತನವಾಗಿ ನಿರ್ಮಿಸಲಾದ ಹವಾನಿಯಂತ್ರಿತ ಪಾಲಿಕೆ ಬಜಾರ್ ಆಗಿದೆ. ಇದರ ಶ್ರೇಯಸ್ಸು ಕೃಷ್ಣಪ್ಪ ಅವರಿಗೆ ಸಲ್ಲಲೇಬೇಕು. ಈ ಪಾಲಿಕೆಗೆ ಶ್ರೀಕೃಷ್ಣದೇವರಾಯ ಪಾಲಿಕೆ ಬಜಾರ್ ಎಂದು ಹೆಸರಿಡಲಾಗಿದೆ.
ಪಾಲಿಕೆ ಬಜಾರ್‌ನ್ನು ಭಾನುವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಿದ್ದು, ಗೋವಿಂದರಾಜ ಶಾಸಕ ಪ್ರಿಯಕೃಷ್ಣ, ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಕೃಷ್ಣಪ್ಪ, ಸರಕಾರದ ಸಚಿವರು, ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ವಿಜಯನಗರದ ಮೆಟ್ರೋ ನಿಲ್ದಾಣದ ಸಮೀಪವಿರುವ ಈ ಪಾಲಿಕೆ ಬಜಾರ್ ಅಂಡರ್ ಗೌಂಡ್ ಹವಾನಿಯಂತ್ರಿತ ಮಾರುಕಟ್ಟೆಯಾಗಿರಲಿದ್ದು, ಸಾರ್ವಜನಿಕರಿಗೆ ಅನುಕೂಲಕರ ಸ್ಥಳದಲ್ಲಿದೆ. 2017ರ ಡಿಸೆಂಬರ್‌ನಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಸಾರ್ವಜನಿಕರ ಸಂಚಾರಕ್ಕೂ ಸಮಸ್ಯೆಯಾಗುತ್ತಿತ್ತು. ಹೀಗಾಗಿ ವ್ಯಾಪಾರಿಗಳಿಗೂ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಈ ಪಾಲಿಕೆ ಬಜಾರ್‌ನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಸಂಚಾರ ಸಮಸ್ಯೆ ನಿವಾರಣೆ
ಪಾಲಿಕೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿರುವ ಕಾರ್ಡ್‌ಗಳೂ ಇರುವುದರಿಂದ ತುಂಬಾ ಕಡಿಮೆ ವೆಚ್ಚದಲ್ಲಿ ಮಳಿಗೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡಬಹುದಾಗಿದೆ. ಇಲ್ಲಿ ವ್ಯಾಪಾರಿಗಳಿಗೆ ಕಡಿಮೆ ವೆಚ್ಚದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುತ್ತಿದ್ದು, ಇಲ್ಲಿ ಎಸಿ, ಶೌಚಾಲಯ ಹಾಗೂ ಇತರೆ ಅನಿವಾರ್ಯ ಸೌಕರ್ಯಗಳನ್ನು ಮಾಡಿಕೊಡಲಾಗುತ್ತಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಳಿಗೆಗಳನ್ನು ಇಡುವುದರಿಂದ ಜನರಿಗೆ ಸಂಚರಿಸಲೂ ಅನಾನುಕೂಲವಾಗುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಅಂಡರ್ ಗೌಂಡ್ ಪಾಲಿಕೆ ಬಜಾರ್ ಸಹಕಾರಿಯಾಗಲಿದೆ. ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಲಾದ ಈ ಮಾರುಕಟ್ಟೆಯಲ್ಲಿ 79 ಕ್ಕೂ ಹೆಚ್ಚು ಮಳಿಗೆಗಳು ಇರಲಿದೆ. ಜತೆಗೆ ಎರಡು ಎಸ್ಕಲೇಟರ್, ಒಂದು ಲಿಫ್ಟ್ ಇರಲಿದ್ದು, 7-8 ಪ್ರದೇಶ ಹಾಗೂ ನಿರ್ಗಮನ ಪಾಯಿಂಟ್‌ಗಳಿರಲಿವೆ. 7-8 ಸೈಲೈಟ್‌ಗಳೂ ಇರಲಿದೆ.
ಈ ಹೊಸ ಮಾರುಕಟ್ಟೆ ನಿರ್ಮಾಣವಾಗಿರುವ ಪ್ರದೇಶದಲ್ಲಿ ಈ ಹಿಂದೆ 150 ಕ್ಕೂ ಹೆಚ್ಚು ಮಾರಾಟಗಾರರು ತರಕಾರಿಗಳು, ಹೂವುಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವ ವ್ಯಾಪಾರ -ವಹಿವಾಟು ನಡೆಯುತ್ತಿದ್ದವು. ಹೊಸ ಅಂಡರ್ ಗೌಂಡ್ ಮಾರುಕಟ್ಟೆಗೆ ಸ್ಥಳಾವಕಾಶ ಕಲ್ಪಿಸಲು ಹಳೆಯ ಸರ್ವೀಸ್ ರಸ್ತೆಯನ್ನು ಪರಿವರ್ತಿಸಲಾಗಿದೆ. ಮೆಟ್ರೋ ನಿಲ್ದಾಣದ ಬಳಿ ಸಬ್‌ವೇ ಪಕ್ಕದಲ್ಲಿ ಈ ಅಂಡರ್ ಗೌಂಡ್ ಪಾಲಿಕೆ ಬಜಾರ್ ಇರಲಿದ್ದು, ಮೆಟ್ರೋದ ನಿರ್ಗಮನಕ್ಕೂ ಬಜಾರ್ ಆಗಮನಕ್ಕೂ 10 ಮೀ. ಅಂತರವಿರಲಿದೆ.
ಏನೆಲ್ಲ ವ್ಯವಸ್ಥೆ..?
* ಒಂದು ಎಲೆಕ್ಟ್ರಿಕ್ ಕೋಣೆ
* ಒಂದು ಸ್ಟೋರ್ ಆಫೀಸ್
* 26 ಒಳಾಂಗಣ ಎಸಿ ಯೂನಿಟ್
• ಐದು ಹೊರಾಂಗಣ ಯುನಿಟ್
* ಎಂಟು ಆಗಮನ-ನಿರ್ಗಮನ ಪಾಯಿಂಟ್
* ಎರಡು ಎಸ್ಕಲೇಟರ್
* ಒಂದು ಗೂಡ್ಸ್ ಅಥವಾ ವ್ಯಕ್ತಿಗಳ ಲಿಫ್ಟ್


