BBMP
Loading ...

ಬೆಂಗಳೂರು: ಸಾಮಾನ್ಯವಾಗಿ ಭಾರತದಲ್ಲಿ ಗಂಡ-ಹೆಂಡತಿ ಮಧ್ಯೆ ಡಿವೋರ್ಸ್‌ ಆದಾಗ ಪತ್ನಿ ಮುಂದಿನ ಜೀವನ ನಡೆಸಲು ಪತಿ ಜೀವನಾಂಶವನ್ನು ಕೊಡಬೇಕಾಗುತ್ತದೆ. ಇದು ಆಕೆಯ ಜೀವನ ನಿರ್ವಹಣೆಗೆ ಬೇಕಾದ ನಿರ್ಧಿಷ್ಟ ಮೊತ್ತವನ್ನು ಒಳಗೊಂಡಿರುತ್ತದೆ. ಆದರೆ ಜೀವನಾಂಶಕ್ಕಾಗಿ 6 ಲಕ್ಷ ರೂ.ಗಳ ಮಾಸಿಕ ಮೊತ್ತಕ್ಕಾಗಿ ಬೇಡಿಕೆಯಿಟ್ಟ ಮಹಿಳೆಗೆ ಜಡ್ಜ್‌ ಛೀಮಾರಿ ಹಾಕಿರುವ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪತಿಯಿಂದ 6 ಲಕ್ಷ ಮಾಸಿಕ ಜೀವನಾಂಶ ಪಡೆಯಲು ಮಹಿಳೆಯ ಪರ ವಕೀಲರು ವಾದ ಮಂಡಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಮಹಿಳಾ ನ್ಯಾಯಾಧೀಶೆ ಆಕೆಯನ್ನು ಹಿಗ್ಗಾಮುಗ್ಗಾ ಬೈಯುತ್ತಾರೆ.

ಡ್ರೆಸ್, ಶೂಸ್‌, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂಪಾಯಿ ಮತ್ತು ಮನೆಯಲ್ಲಿ ಊಟಕ್ಕೆ 60,000 ರೂಪಾಯಿ ಬೇಕಾಗುತ್ತದೆ ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಆಕೆಯ ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂಪಾಯಿ ಅಗತ್ಯವಿದೆ ಎಂದು ಬೇಡಿಕೆಯಿಡುತ್ತಾರೆ. ಇದಕ್ಕೆ ಪ್ರತಿಯಾಗಿ ನ್ಯಾಯಾಧೀಶೆ, ʼಅಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ ಅವಳು ಸ್ವತಃ ಸಂಪಾದಿಸುವುದು ಒಳ್ಳೆಯದು. ಇಷ್ಟೊಂದು ಹಣಕ್ಕೆ ಬೇಡಿಕೆಯಿಡುವುದು ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆಯಾಗಿದೆʼ ಎಂದು ಹೇ:ಉತ್ತಾರೆ.

ʼಒಬ್ಬ ವ್ಯಕ್ತಿಯ ಖರ್ಚಿಗೆ ಇಷ್ಟೊಂದು ಹಣ ಬೇಕಾಗುತ್ತದೆಯೆಂದು ನ್ಯಾಯಾಲಯಕ್ಕೆ ದಯವಿಟ್ಟು ಹೇಳಬೇಡಿ. ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಅವಳು ಸಹ ಒಬ್ಬಂಟಿ ಮಹಿಳೆ, ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ಅವಳು ಖರ್ಚು ಮಾಡಲು ಬಯಸಿದರೆ, ಅವಳು ಸಂಪಾದಿಸಲಿ. ಗಂಡನ ಮೇಲೆ ಆಪಾದನೆ ಮಾಡುವುದಲ್ಲʼ ಎಂದು ನ್ಯಾಯಾಧೀಶರು ಹೇಳಿದರು. ಮಾತ್ರವಲ್ಲ ಮಹಿಳೆಯ ವಕೀಲರು ಸಮಂಜಸವಾದ ಮೊತ್ತಕ್ಕೆ ಬೇಡಿಕೆ ಇಡಬೇಕು. ಇಲ್ಲವಾದರೆ ಅವರ ಮನವಿಯನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿದರು.

ರಾಧಾ ಮುನುಕುಂಟ್ಲಾ ಎಂಬ ಮಹಿಳೆಯ ಖರ್ಚು ವೆಚ್ಚದ ಕುರಿತು ಆಗಸ್ಟ್ 20ರಂದು ವಿಚಾರಣೆ ನಡೆಯಿತು. ಪತಿ ಎಂ.ನರಸಿಂಹ ಅವರಿಂದ ಮಾಸಿಕ 50,000 ರೂ. ಮಧ್ಯಂತರ ನಿರ್ವಹಣೆ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠವು ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಇದು ನ್ಯಾಯಾಲಯದ ಪ್ರಕ್ರಿಯೆಯ ಶೋಷಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಇಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ ಆಕೆ ಸಂಪಾದಿಸಬಹುದು ಎಂದು ನ್ಯಾಯಾಧೀಶರು ಹೇಳಿದರು.

ವಿಜಯನಗರದಲ್ಲಿ ದೆಹಲಿ ಮಾದರಿ ಪಾಲಿಕೆ ಅಂಡರ್​ಗ್ರೌಂಡ್ ಬಜಾರ್: ಶಾಸಕ ಕೃಷ್ಣಪ್ಪರ ಕನಸು ನನಸು

Leave a Reply

Your email address will not be published. Required fields are marked *