BBMP
Loading ...

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ತಿಂಗಳು ಮನೆಗಳಿಗೆ ಜೀರೋ ವಿದ್ಯುತ್ ಬಿಲ್ ಬರುತ್ತಿದೆ. ಆದರೆ ಇಲ್ಲೊಂದು ಮನೆಗೆ ಪ್ರತಿ ತಿಂಗಳು ಬರೋಬ್ಬರಿ ಐದು ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತಿದ್ದು, ಇದರಿಂದ ಮನೆ ಮಾಲೀಕ ಶಾಕ್ ಆಗಿರುವಂತಹ ಘಟನೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರದ ತಿಂಡ್ಲುವಿನಲ್ಲಿ ನಡೆದಿದೆ.

ಮಾಲೀಕ ಪ್ರಸನ್ನ ಕುಮಾರ್​ ಅವರದು ಮಧ್ಯಮ ವರ್ಗದ ಮನೆ. ಮನೆಯ ಟೆರಸ್ ಮೇಲೆ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿರುವುದರಿಂದ ಪ್ರತಿ ತಿಂಗಳು 200 ರಿಂದ 250 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಇದೀಗ ಏಕಾಏಕಿ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ 12 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಜೂನ್ ತಿಂಗಳಲ್ಲಿ 5,91,087 ಲಕ್ಷ ರೂ. ಬಿಲ್ ಬಂದಿದ್ದರೆ, ಆಗಸ್ಟ್​ನಲ್ಲಿ 5,86,736 ಲಕ್ಷ ರೂ. ಬಿಲ್ ಬಂದಿದ್ರೆ, ಜುಲೈ ತಿಂಗಳಲ್ಲಿ ಕೇವಲ 214 ರೂ. ಬಂದಿದೆ ಅಂತೆ. ಈಗಾಗಲೇ ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿರುವ ಮನೆ ಮಾಲೀಕ ಪ್ರಸನ್ನ ಕುಮಾರ್, ಮಧ್ಯಮ ವರ್ಗದ ಜನರಿಗೆ ಬೆಸ್ಕಾಂ ಈ ರೀತಿ ಶಾಕ್ ನೀಡಿದರೆ ಹೇಗೆ ನಾವು ಇರೋದು ಅಂತಾರೇ.

ಇನ್ನೂ ಈ ಬಗ್ಗೆ ನಾಳೆ ಮನೆ ಮಾಲೀಕ ಪ್ರಸನ್ನ ಕುಮಾರ್ ಬೆಸ್ಕಾಂ ಮುಖ್ಯ ಕಚೇರಿಗೆ ದೂರು ನೀಡಲು ಮುಂದಾಗಿದ್ದಾರೆ. ಇಷ್ಟು ಬಿಲ್ ಕಟ್ಟಲು ಹೇಳಿದರೆ ನಾವು ಮನೆ ಮಾರಾಟ ಮಾಡಬೇಕಾಗುತ್ತದೆ. ಈ ಬಿಲ್ ನೋಡಿದ್ದೆ ಹಾರ್ಟ್ ಅಟ್ಯಾಕ್ ಆಗಿ ಹೋಗ್ತಾನೆ ಮನುಷ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಬೆಸ್ಕಾಂ ಜೂನಿಯರ್ ಇಂಜಿನಿಯರ್ ಉಮಾಶಂಕರ್ ಅವರನ್ನು ಕೇಳಿದರೆ, ನನಗೆ ಬಿಲ್ ಕಳಿಸಲು ಹೇಳಿ ನಾನು ಪರಿಶೀಲನೆ ಮಾಡುತ್ತೇನೆ. ನಾನು ರಜೆಯಲ್ಲಿ ಇದ್ದೀನಿ ನಾಳೆ ಚೆಕ್ ಮಾಡುತ್ತೇನೆ. ಟೆಕ್ನಿಕಲ್ ಸಮಸ್ಯೆಯಿಂದ ಆಗಿರಬಹುದು, ತಪಾಸಣೆ ಮಾಡುತ್ತೇನೆ ಎಂದಿದ್ದಾರೆ.

ಪ್ರತಿ ತಿಂಗಳು ನೂರೋ ಇನ್ನೂರೋ ವಿದ್ಯುತ್ ಬಿಲ್ ಬರುತ್ತಿದ್ದ ಮನೆಗೆ, ಏಕಾಏಕಿ ಹನ್ನೆರಡು ಲಕ್ಷ ರೂ. ವಿದ್ಯುತ್ ಬಿಲ್ ಬಂದರೆ ಆ ಮನೆ ಮಾಲೀಕನ ಪರಿಸ್ಥಿತಿ ಏನಾಗಬೇಡ ಹೇಳಿ, ಕೂಡಲೇ ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ‌‌.

10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ದಿನಗೂಲಿ ನೌಕರರ ಸೇವೆ ಕಾಯಂ: ಹೈಕೋರ್ಟ್ ಮಹತ್ವದ ಆದೇಶ

Leave a Reply

Your email address will not be published. Required fields are marked *