BBMP
Loading ...

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಸಲಾಗಿದೆ. ಕನ್ಹಯ್ಯ ಅವರ ತಂಡ ಇಂದು ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯವನ್ನು ಆರಂಭಿಸಿದ್ದು, ಇದೀಗ ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಇದೀಗ ಮೊದಲ ಸ್ಟಾಪ್ ಲಾಗ್‌ ಅಳವಡಿಸಲಾಗಿದೆ.

ಈ ಖುಷಿಯ ವಿಚಾರವನ್ನು ಸಚಿವ ಶಿವರಾಜ್ ತಂಗಡಗಿ ಹಂಚಿಕೊಂಡಿದ್ದಾರೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆಗೂ ಮುನ್ನ, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಸಚಿವರು ಪೂಜೆ ಕಾರ್ಯ ನೆರವೇರಿಸಿದ್ದರು. ಈ ಕಾರ್ಯ ಯಶಸ್ವಿಯಾದ ಬೆನ್ನಲ್ಲೇ ಜಲಾಶಯದಲ್ಲೇ ಶಾಸಕರು, ಸಂಸದರು, ಸ್ಟಾಪ್ ಲಾಗ್ ಅಳವಡಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸದ್ಯ 60 ಅಡಿ ಅಗಲ 4 ಅಡಿ ಉದ್ದದ ಮೊದಲ ಸ್ಟಾಪ್ ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಗೊಂಡಿದೆ ಎಂದು ತಿಳಿಸಿರುವ ಸಚಿವರು, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಗೆ ಶ್ರಮಿಸಿದ ತಜ್ಞರಾದ ಕನ್ನಯ್ಯ ನಾಯ್ಡುರವರಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಸಮಸ್ತ ಸಿಬ್ಬಂದಿ ವರ್ಗಕ್ಕೆ, ಜಿಂದಾಲ ಕಂಪನಿಯವರಿಗೆ, ಹಿಂದುಸ್ತಾನ ಮತ್ತು ನಾರಾಯಣ ಇಂಜಿನಿಯರಿಂಗ್ ವರ್ಕ್ಸ್ ನವರಿಗೆ, ಭದ್ರತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪೊಲೀಸ್ ಸಿಬ್ಬಂಧಿಯವರಿಗೆ, ಅಗ್ನಿಶಾಮಕ ದಳದವರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನು ಒಟ್ಟು 5 ಸ್ಟಾಪ್ ಲಾಗ್ ಗೇಟ್‌ಗಳನ್ನು ಅಳವಡಿಕೆ ಮಾಡಲು ಕಾರ್ಯ ಪ್ರಾರಂಭ ಮಾಡಲಾಗಿದ್ದು, ಒಂದು ಸ್ಟಾಪ್ ಲಾಗ್ ಗೇಟ್ 25 ಟಿಎಂಸಿ ನೀರನ್ನು ತಡೆಯುತ್ತದೆ. ಹೀಗಾಗಿ ಒಟ್ಟು 5 ಗೇಟ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಅವಶ್ಯಕತೆ ಇದ್ದರೆ ಇನ್ನೂ ಮೂರು ಗೇಟ್‌ಗಳನ್ನು ಅಳವಡಿಕೆ ಮಾಡುತ್ತೇವೆ ಎಂದು ತಿಳಿಸಿರುವ ಅಧಿಕಾರಿಗಳು ಸದ್ಯ ಒಟ್ಟು 90 ಟಿಎಂಸಿ ನೀರನ್ನು ಸಂಗ್ರಹ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಈ ಹಿಂದೆಯೇ ತಿಳಿಸಿದ್ದು. ಇದೀಗ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯಯಶಸ್ವಿಯಾಗಿದ್ದು, ಇದೇ ಉತ್ಸಾಹದಲ್ಲಿ ಮುಂದಿನ ಕಾರ್ಯ ಭರದಿಂದ ಸಾಗಲಿದೆ.

Breaking News| ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ

Leave a Reply

Your email address will not be published. Required fields are marked *