BBMP
Loading ...

Revanna

ಬೆಂಗಳೂರು : ಮಹಿಳೆಯರ ಮೇಲೆ ಅತ್ಯಾಚಾರ ಆರೋಪದಡಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಅಸಲಿ ಎಂದು ಎಫ್ ಎಸ್ ಎಲ್ ಇದೀಗ ವರದಿ ಬಹಿರಂಗಗೊಳಿಸಿದೆ.

ಹೌದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ತನಿಖೆ ನಡೆಸುತ್ತಿರುವ ಎಸ್​​ಐಟಿ ತಂಡ ಪೆನ್‌ಡ್ರೈವ್‌ಗಳಿಂದ ಹತ್ತಾರು ಅಶ್ಲೀಲ ವಿಡಿಯೋಗಳನ್ನು ಸಂಗ್ರಹ ಮಾಡಿತ್ತು. ಈ ವಿಡಿಯೋಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಇದರ ರಿಪೋರ್ಟ್ ಬಂದಿದ್ದು, ಎಲ್ಲಾ ವಿಡಿಯೋಗಳು ಅಸಲಿ ಎಂದು ಗೊತ್ತಾಗಿದೆ.

ಯಾವ ವಿಡಿಯೋಗಳನ್ನು ತಿರುಚಲಾಗಿಲ್ಲ ಎಂದು FSL (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳಲ್ಲಿ ಪುರಷನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುವುದು ತನಿಖೆಯ ಬಳಿಕವೇ ತಿಳಿದುಬರಲಿದೆ.

ಇನ್ನು ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತು. ಈ ಒಂದು ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಅವರು ಹತ್ತು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಪತ್ನಿ ಭವಾನಿ ರೇವಣ್ಣ ಅವರ ಹೆಸರು ಕೂಡ ಕೇಳಿಬಂದಿತ್ತು.

ಹೀಗೂ ಉಂಟೆ! 120 ರೂ.ಗೆ ಕಿಸ್, 11 ರೂ.ಗೆ ಹಗ್… ಚೀನಾದಲ್ಲಿ ಹೆಚ್ಚಾಗ್ತಿದೆ ಸ್ಟ್ರೀಟ್​ ಗರ್ಲ್​ಫ್ರೆಂಡ್​ ಟ್ರೆಂಡ್

Leave a Reply

Your email address will not be published. Required fields are marked *