BBMP
Loading ...

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಸುಳಿಯಿಂದ ಹೊರ ಬರೋಕೆ ಮಾಡ್ತಿರುವ ಸರ್ಕಸ್ ಒಂದಲ್ಲಾ ಎರಡಲ್ಲ. ಇದರ ನಡುವೆ ಇದೀಗ ಮತ್ತೊಂದು ವಿವಾದಾತ್ಮಕ ನಡೆಯನ್ನು ಇಟ್ಟಿದೆ ಸರ್ಕಾರ. ಪಾಲಿಕೆ ಆಸ್ತಿಗಳನ್ನು ಹರಾಜಿಗಿಟ್ಟು ಸಾವಿರಾರು ಕೋಟಿ ರೂಪಾಯಿ ಮೂಲಕ ಖಜಾನೆ ತುಂಬಿಸಲು ಹೊರಟಿದೆ.

ರಾಜ್ಯ ಸರ್ಕಾರ ಕೊನೆಗೂ ಬಿಬಿಎಂಪಿ ಆಸ್ತಿಗಳ ಮೇಲೆ ಕಣ್ಣು ಹಾಕಿದೆ. ಬಿಬಿಎಂಪಿ ಅಧೀನದ ಆಸ್ತಿಗಳನ್ನು ಸರ್ಕಾರ ತನ್ನ ಅಧಿಕಾರ ಬಳಸಿ ಹರಾಜಿಗಿಡಲು ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಸರ್ಕಾರ ಖಡಕ್​ ಸೂಚನೆ ಕೊಟ್ಟಿದ್ದು, ಶೀಘ್ರವೇ ಪಾಲಿಕೆಯ ಅಧಿಕಾರದಲ್ಲಿರುವ ಸ್ವತ್ತನ್ನು ಹರಾಜಿಗಿಟ್ಟು ಮಾರಾಟ ಮಾಡಲು ಮುಂದಾಗ್ತಿದೆ. ಬೆಂಗಳೂರಲ್ಲಿ ಬಿಬಿಎಂಪಿ ಕೋಟ್ಯಾಂತರ ಬೆಲೆಬಾಳುವ ಆಸ್ತಿಯನ್ನು ಕಡಿಮೆ ದರಕ್ಕೆ ನಿಗದಿ ಮಾಡಿ ಭೋಗ್ಯಕ್ಕೆ ನೀಡಿದೆ. ಇದರಿಂದ ಕಡಿಮೆ ಆದಾಯ ಪಾಲಿಕೆಗೆ ಹರಿದು ಬರುತ್ತಿದೆ. ಇದೀಗ ಇಂಥಾ ಆಸ್ತಿಗಳನ್ನು ಪಟ್ಟಿ ಮಾಡಿ ಹರಾಜು ಹಾಕಲು ಪ್ಲ್ಯಾನ್ ನಡೆದಿದೆ.

ಪಾಲಿಕೆ ಒಡೆತನದಲ್ಲಿರುವ 6,815 ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಇದರ ಒಟ್ಟು ಭೂ ವಿಸ್ತೀರ್ಣ ಅಂದಾಜು 50 ಎಕರೆ ಆಗಲಿದೆ. ಇಷ್ಟು ಸ್ವತ್ತನ್ನು ಹಾರಾಜಿಗೆ ಇಟ್ಟರೆ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ ಬಿಬಿಎಂಪಿ ಶಾಲೆಗಳಿಗೆ, ಕ್ಲಬ್‌​​ಗಳಿಗೆ, ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೇರಿದಂತೆ ಇತರೆ ಕಟ್ಟಡ ಹಾಗೂ ಕೆಲಸಕ್ಕೆ ಎಕರೆಗಟ್ಟಲೆ ಭೂಮಿಯನ್ನು ವಾರ್ಷಿಕ 50 ರೂಪಾಯಿಂದ 100ರೂಪಾಯಿವರೆಗೆ ಭೋಗ್ಯಕ್ಕೆ ನೀಡಿದೆ. ಇದರ ಜೊತೆಗೆ ಕೆಲವು ಕಡೆಗಳಲ್ಲಿ ಬಾಡಿಗೆ ಹಾಗೂ ಗುತ್ತಿಗೆಗೆ ನೀಡಿದೆ. ಪಾಲಿಕೆಯೇ ನೇರ ಒಡೆತನದಲ್ಲಿ 200 ಎಕೆರೆಗೂ ಅಧಿಕ ವಿಸ್ತೀರ್ಣದ ಆಸ್ತಿಗಳಿವೆ. ಈ ಪೈಕಿಗೆ ಕೆಲವು ಸಾಲಕ್ಕಾಗಿ ವಿವಿಧ ಅಂತರಾರಷ್ಟ್ರೀಯ ಬ್ಯಾಂಕ್‌ಗಳಲ್ಲಿ ಅಡವಿಡಲಾಗಿದೆ. ಇದೀಗ ಈ ಪೈಕಿ ಅಂದಾಜು 50 ಎಕೆರೆಯಷ್ಟು ಸ್ವತ್ತನ್ನು ಹರಾಜಿಗಿಡಲು ನಿರ್ಧರಿಸಲಾಗಿದೆ.

ಸರ್ಕಾರದ ಉದ್ದೇಶಿಸಿರುವ ಹರಾಜಿನಲ್ಲಿ ಪಾಲ್ಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಅವಕಾಶ ಇರಲಿದೆ. ಇದರಲ್ಲಿ ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳಿಗೆ ಭಾಗಿಯಾಗಲು ಅವಕಾಶ ಇರೋದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಆದಾಗಿಯೂ ಬೆಂಗಳೂರಿನ ಜನರು ಬೆವರು ಬಸಿದು ಕಟ್ಟಿದ ತೆರಿಗೆಯಿಂದ ಸಂಪಾದಿಸಿದ ಆಸ್ತಿಗಳನ್ನು ಸರ್ಕಾರದ ಇತರೆ ಸಂಸ್ಥೆಗಳಿಗಾದರೂ ಮಾರಾಟ ಮಾಡುವುದರಿಂದ ಬೆಂಗಳೂರು ಜನರ ಕೈಯಿಂದ ಆಸ್ತಿ ಕೈ ತಪ್ಪಿಹೋಗಲಿದೆ. ನಾವು ತೆರಿಗೆ ಕಟ್ಟಿ ಬೆಳೆಸಿದ ಸಂಸ್ಥೆಯ ಆಸ್ತಿಯನ್ನು ಯಾರಿಗೂ ಬಿಟ್ಟುಕೊಡಬಾರದು ಎನ್ನುವುದು ಬೆಂಗಳೂರಿನ ತೆರಿಗೆದಾರರ ಅಭಿಪ್ರಾಯವಾಗಿದೆ.

ಜುಲೈ 20 ರಂದು ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಬಿಬಿಎಂಪಿ ಆಸ್ತಿತಗಳನ್ನು ಹರಾಜು ಹಾಕುವ ಬಗ್ಗೆ ಸಾರ್ವಜನಿಕರ ಆಕ್ಷೇಪಗಳಿದ್ದರೆ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಉಲ್ಲೇಖಿಸಿತ್ತು. ಒಂದು ತಿಂಗಳ ಅವಧಿ ನೀಡಿ ಆಕ್ಷೇಪಣೆಗಳಿದ್ದರೆ ನೀಡುವಂತೆ ಹೇಳಿತ್ತು. ಒಟ್ಟಾರೆ ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ಕೇಳಿ ಬರ್ತಿದೆ.

ಎಸ್ಎಸ್ಎಲ್​ಸಿ, ಪಿಯುಸಿಯಲ್ಲಿ ಫೇಲಾದರು ಕೂಡ ಕ್ಲಾಸ್​ಗೆ ಹೋಗಬಹುದು: ಸರ್ಕಾರದಿಂದ ಮಹತ್ವದ ಆದೇಶ

Leave a Reply

Your email address will not be published. Required fields are marked *