ಮೈಸೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಇದೇ ತಿಂಗಳ 30ನೇ ತಾರೀಖಿನಂದು ಮಂಗಳವಾರ ಶ್ರೀ ಚಾಮುಂಡೇಶ್ವರಿ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ದಿನದಂದು ಎಲ್ಲರು ಕುಟುಂಬ ಸಮೇತರಾಗಿ, ಬಂಧು-ಮಿತ್ರರೊಡನೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಬೇಕೆಂದು ಮೈಸೂರು ಜಿಲ್ಲಾ ಸಮಿತಿ ಹೃದಯಪೂರ್ವಕವಾಗಿ ಕೋರಿದೆ.
* ಮಹಾಮಂಗಳಾರತಿ : ಮಧ್ಯಾಹ್ನ 12-00 ಗಂಟೆಗೆ
* ಭೋಜನ : ಮಧ್ಯಾಹ್ನ 12-30 ರಿಂದ 4-00 ರವರೆಗೆ
* ಸ್ಥಳ : ಚಾಮುಂಡಿ ಬೆಟ್ಟದ ಪಾದ, ಚಾಮುಂಡಿ ಬೆಟ್ಟದ ಮೆಟ್ಟಿಲು ಬಲಭಾಗ, ಸೈಕಲ್ ಸ್ಟಾಂಡ್ ಹತ್ತಿರ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಎದುರು, ಮೈಸೂರು.
ಮೈಸೂರು ಜಿಲ್ಲಾ ಕೇಂದ್ರ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಮೈಸೂರು ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಮೈಸೂರು ಜಿಲ್ಲಾ ಕಟ್ಟಡ, ಕ್ರೀಡೆ ಹಾಗೂ ಸಾಂಸ್ಕೃತಿಕ ಉಪ ಸಮಿತಿ, ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಸಮಿತಿ, ಉಪ ಸಮಿತಿಯ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮೈಸೂರು ಜಿಲ್ಲೆಯ ಎಲ್ಲಾ ವಿದ್ಯುತ್ ಗುತ್ತಿಗೆದಾರ ಬಂಧುಗಳು ಆತ್ಮೀಯವಾಗಿ ಶುಭಕೋರಿದ್ದಾರೆ.



