ಬೆಂಗಳೂರು: ಗೋವಿಂದರಾಜನಗರ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ದಿನದಿಂದ ಪ್ರಿಯಾಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಗೋವಿಂದರಾಜನಗರ ವಾರ್ಡ್ 104ರ ವ್ಯಾಪ್ತಿಯ ಶ್ರೀ ಪಾಂಡುರಂಗ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ವೈಯಕ್ತಿಕವಾಗಿ ಸಹಾಯ ಹಸ್ತ ನೀಡಿದ್ದಾರೆ. ಮೂಡಲಪಾಳ್ಯ ವಾರ್ಡ್ 127ರ ವ್ಯಾಪ್ತಿಯ ಸಂಜೀವಿನಿನಗರದಲ್ಲಿ ಅಪಾಯಕಾರಿ ಪಾದಚಾರಿ ಮಾರ್ಗಗಳ ಪರಿವರ್ತಕ ಕಂಬಗಳಿಗೆ ಮುಕ್ತಿ ನೀಡಲು ಹೊಸ ವಿನ್ಯಾಸದ 11 ಮೀಟರ್ ಎತ್ತರದ ಕಂಬಗಳನ್ನು ಅಳವಡಿಸಿ, ಪಾದಚಾರಿಗಳಿಗೆ ಉಂಟಾಗುತ್ತಿದ್ದ ಅಡಚಣೆಯನ್ನು ಸರಿಪಡಿಸಿದ್ದಾರೆ.
ಗೋವಿಂದರಾಜನಗರ ವಾರ್ಡ್ 104ರ ವ್ಯಾಪ್ತಿಯಲ್ಲಿ ಮಳೆ ಸುರಿದ ಪರಿಣಾಮವಾಗಿ ಬಿದ್ದ ಮರವನ್ನು ಬಿಬಿಎಂಪಿ ಸಿಬ್ಬಂದಿಗಳ ಸಹಕಾರದೊಂದಿಗೆ ಸರಿಪಡಿಸಿದ್ದಾರೆ. ಮೂಡಲಪಾಳ್ಯ ವಾರ್ಡ್ 127ರ ವ್ಯಾಪ್ತಿಯಲ್ಲಿ ಮಳೆ ಸುರಿದ ಪರಿಣಾಮವಾಗಿ ಬಿದ್ದ ಮರವನ್ನು ಬಿಬಿಎಂಪಿ ಸಿಬ್ಬಂದಿಗಳ ಸಹಕಾರದೊಂದಿಗೆ ಸರಿಪಡಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯ ಹೆಚ್.ವಿ.ಆರ್ ಬಡಾವಣೆಯಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.
ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿ: ಗ್ರಾಹಕರ ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಬೆಸ್ಕಾಂ


