ಬೆಂಗಳೂರು: ಮುಡಾ ಸೈಟು ಹಂಚಿಕೆ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಮಾಲೀಕರ ಗಮನಕ್ಕೆ ಬಾರದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬಕ್ಕೆ ನೋಂದಣಿ ಮಾಡಿಸಿರುವ ಆರೋಪ ಕೇಳಿಬಂದಿದೆ. ಮೋಸದಿಂದ ಮುಖ್ಯಮಂತ್ರಿ ಕುಟುಂಬಕ್ಕೆ ಭೂಮಿ ಮಾರಾಟವಾಗಿ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಮೀನು ಮಾಲೀಕ ನಿಂಗನ ಮೊಮ್ಮಗ ಜವರಯ್ಯ ಎಂಬುವರು ಈ ಗಂಭೀರ ಆರೋಪ ಮಾಡಿದ್ದಾರೆ. ಅಜ್ಜನ ಹೆಸರಲ್ಲಿ ಜಮೀನು ಇರುವುದೇ ನಮಗೆ ಗೊತ್ತಿರಲಿಲ್ಲ. ಅಜ್ಜನ ಆಸ್ತಿಯನ್ನು ಪಾಲು ಮಾಡದೆ ಮತ್ತು ನಮ್ಮ ಗಮನಕ್ಕೆ ತರದೇ ಆಸ್ತಿ ಮಾರಾಟ ಮಾಡಲಾಗಿದೆ. ಆಸ್ತಿ ಮಾರಾಟವಾಗಿರುವುದು ಮಾಧ್ಯಮಗಳ ಮೂಲಕ ನಮಗೆ ತಿಳಿದಿದೆ. ಸಿಎಂ ಕುಟುಂಬಕ್ಕೆ ಯಾವಾಗ ಮಾರಿದ್ದಾರೋ ನಮಗೆ ಗೊತ್ತಿಲ್ಲ. ನಮಗೆ ನ್ಯಾಯ ಕೊಡಿಸಬೇಕೆಂದು ಜವರಯ್ಯ ಆಗ್ರಹಿಸಿದ್ದಾರೆ.
ಇನ್ನು ಸಿಎಂ ಸಿದ್ದುಗೆ ಭ್ರಷ್ಟಾಚಾರ ಆರೋಪ ಸುತ್ತಿಕೊಂಡಿದೆ. ಸಿಎಂ ಭ್ರಷ್ಟಾಚಾರಕ್ಕೆ ತಮ್ಮ ಶ್ರೀಮತಿ ಹೆಸರಿನಲ್ಲಿ ಕಬಳಿಸಿರುವ ವಿವಾದಿತ ದೇವನೂರ ಜಮೀನೇ ಸಾಕ್ಷಿ ಎನ್ನಲಾಗಿದೆ. ಕುಂಕುಮ ರೂಪದಲ್ಲಿ ಸಿದ್ದರಾಮಯ್ಯನವರು ಕಬಳಿಸಿರುವ ಜಮೀನು ಅದರ ಮೂಲ ಮಾಲೀಕರಾದ ಮಲ್ಲಯ್ಯ ಮತ್ತು ಮೈಲಾರಯ್ಯನವರಿಗೆ ಮಾಹಿತಿಯೇ ಇಲ್ಲ. ಅಲ್ಲದೇ ಕಬಳಿಸಿರುವ ಜಮೀನಿಗೆ ಮುಡಾದಲ್ಲಿ ತಮ್ಮ ಪ್ರಭಾವ ಬಳಸಿ ಪರಿಹಾರವಾಗಿ 14 ಸೈಟು ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ.
ರೌಡಿಗಳು, ರಿಯಲ್ ಎಸ್ಟೇಟ್ ಮಾಫಿಯಾದವರು ಯಾರದೋ ಜಮೀನಿಗೆ ಬೇಲಿ ಹಾಕಿದಂತೆ ಸಿದ್ದರಾಮಯ್ಯನವರು ತಮ್ಮ ಹೆಂಡತಿ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದಾರೆ. ಇಂದಕ್ಕಿಂತಲೂ ಸಾಕ್ಷಿ ಬೇಕಾ ಭ್ರಷ್ಟ ಮುಖ್ಯಮಂತ್ರಿಗಳೇ? ಮೊದಲು ರಾಜೀನಾಮೆ ಕೊಟ್ಟು ಸಿಎಂ ಸ್ಥಾನದ ಘನತೆ ಉಳಿಸಿ ಎಂಬ ಕೂಗು ಕೇಳಿಬರುತ್ತಿದೆ.
ವನ್ಯಜೀವಿಗಳ ಸಾವಿಗೆ ವಿದ್ಯುತ್ ತಂತಿ ಕಂಟಕ: ಎಸ್ಕಾಂಗಳಿಗೆ ಹೈಕೋರ್ಟ್ ನೋಟಿಸ್


