BBMP
Loading ...

Darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ಅವರಿಗೆ ಮಾನಸಿಕ ಖಿನ್ನತೆ ಕಾಡುತ್ತಿದೆಯಂತೆ. ಹೀಗಾಗಿಯೇ ನಿವಾರಣೆಗೆ ಯೋಗದ ಮೊರೆಯನ್ನು ಡಿ ಬಾಸ್ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಬಂಧನವಾಗಿತ್ತು. ಆ ಬಳಿಕ ನ್ಯಾಯಾಂಗ ಬಂಧನವಾಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತ ನಟ ದರ್ಶನ್ ಗೆ ಜೈಲೂಟ ಸೇರುತ್ತಿಲ್ಲವಂತೆ. ಆಗಾಗಲ ಪುಡ್ ಪಾಯಿಸನ್ ಕೂಡ ಆಗುತ್ತಿದೆಯಂತೆ. ಇದೇ ಕಾರಣಕ್ಕೆ ನನಗೆ ಜೈಲೂಟ ಬೇಡ, ಮನೆಯೂಟ ತರಿಸಿಕೊಳ್ಳೋದಕ್ಕೆ ಅವಕಾಶ ನೀಡುವಂತೆ ಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದರು.

ಮತ್ತೊಂದೆಡೆ ಪರಪ್ಪನ ಅಗ್ರಹಾರದಲ್ಲಿರುವಂತ ನಟ ದರ್ಶನ್ ಗೆ ಈಗ ಮಾನಸಿಕ ಖಿನ್ನತೆ ಕಾಡುತ್ತಿದೆಯಂತೆ. ಖೈದಿಗಳು ಬೇಡ, ನನ್ನೊಂದಿಗೆ ಯಾರು ಬೇಡ. ನಾನು ಒಬ್ಬಂಟಿಯಾಗೇ ಇರ್ತೀನಿ ಅನ್ನುತ್ತಿರುವಂತ ಅವರು, ಮಾನಸಿಕ ಖಿನ್ನತೆಯ ನಿವಾರಣೆಗಾಗಿ ಯೋಗ ಮಾಡುತ್ತಿದ್ದಾರಂತೆ.

ಅಂದಹಾಗೇ ನಟ ದರ್ಶನ್ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ಜೈಲು ಸೇರಿ ಒಂದು ತಿಂಗಳೇ ಕಳೆಯುತ್ತಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ಇನ್ನೂ ಜಾಮೀನು ದೊರೆತಿಲ್ಲ.

ಬಿಡಿಎ ಅಕ್ರಮ ಕೇಸ್ ಮುಚ್ಚಿಹಾಕಲು ಲಂಚ ಪಡೆದ ಆರೋಪ: ಸಿಸಿಬಿ ಅಧಿಕಾರಿ ಯತೀಶ್ ಅಮಾನತು

Leave a Reply

Your email address will not be published. Required fields are marked *