ಬೆಂಗಳೂರು: ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದುಕೊಳ್ತಿದ್ದಂತೆ..ಬಸವನಗೌಡ ದದ್ದಲ್ ರನ್ನು ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು..ಆದ್ರೆ ವಿಚಾರಣೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಯಲಹಂಕ ನಿವಾಸದಲ್ಲೂ ಇಲ್ಲ, ದದ್ದಲ್ ನಿವಾಸದಲ್ಲೂ ಇಲ್ಲ.
ವಿಚಾರಣೆ ಬಳಿಕ ಬಂಧನ ಸಾಧ್ಯತೆ ಮುನ್ಸೂಚನೆ ಸಿಕ್ಕ ಹಿನ್ನೆಲೆ ನಾಪತ್ತೆಯಾಗಿರುವ ಬಸನಗೌಡ ದದ್ದಲ್. ಇತ್ತ ಇಡಿ ಅಧಿಕಾರಿಗಳು ಬಂಧನಕ್ಕೆ ತಯಾರಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಬಂಧನ ಕುಣಿಕೆ ಬಿಗಿಯಾಗುತ್ತಿದ್ದಂತೆ ನಾಪತ್ತೆಯಾಗಿರುವ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಿಗಾಗಿ ಹುಡುಕಾಟ ನಡೆಸಿರುವ ಇಡಿ. ಯುನಿಯನ್ ಬ್ಯಾಂಕ್ ಅಧಿಕಾರಿಗಳು ಇನ್ನೂ ಪತ್ತೆಯಾಗಿಲ್ಲ.
ಬ್ಯಾಂಕ್ ಅಧಿಕಾರಿಗಳಿಗಾಗಿ ಎಸ್ ಐಟಿ ,ಇಡಿ,ಸಿಬಿಐ ಮೂರು ತನಿಖಾ ತಂಡಗಳಿಂದಲೂ ಶೋಧಕಾರ್ಯ ನಡೆದಿದೆ. ಈಗಾಗಲೇ ಬ್ಯಾಂಕ್‌ನ ಆರು ಮಂದಿ ಮೇಲೆ ಕೇಸ್ ದಾಖಲಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಆರು ಮಂದಿ ಬ್ಯಾಂಕ್ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ಎಸ್‌ಐಟಿಯಿಂದ ರಿಮ್ಯಾಂಡ್ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ.
ಕರಾಅಪವಿಗು ಸಂಘದ ಬೆಂಗಳೂರು ನಗರ ಜಿಲ್ಲಾ ಸಮಿತಿಯಿಂದ ಕ್ರಿಕೆಟ್ ಪಂದ್ಯಾವಳಿ: N9 ಉಪ ಸಮಿತಿಗೆ ಮೊದಲ ಬಹುಮಾನ


