ಬೆಂಗಳೂರು: ಇಂದು ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಇನ್ನು ಕೆಲ ಅಧಿಕಾರಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಮಧ್ಯೆ ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ನಿವಾಸದ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಒಂದು ಕ್ಷಣ ಶಾಕ್ ಆಗಿದೆ. ನಗರದ ಕುಮಾರಪಾರ್ಕ್ನಲ್ಲಿರುವ ಮೋತಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಚಿನ್ನ ಆಭರಣಗಳ ಜೊತೆಗೆ 5 ತಲವಾರ್, 3 ಚಾಕು ಮತ್ತು 2 ಹುಲಿ ಉಗುರು ಪತ್ತೆ ಆಗಿವೆ.
ದುಬಾರಿ ಮೌಲ್ಯದ 7 ಲೈಟರ್ಗಳು ಕೂಡ ಪತ್ತೆಯಾಗಿದ್ದು, ಬಸವರಾಜ ಮಾಗಿ ವಿಲಾಸಿ ಜೀವನ ನಡೆಸುತ್ತಿದ್ದರು. ಸದ್ಯ ಚಿನ್ನ, 2 ಹುಲಿ ಉಗುರು ಜಪ್ತಿ ಮಾಡಿರುವ ಅರಣ್ಯಾಧಿಕಾರಿಗಳು ಕೊಂಡೊಯ್ದಿದ್ದಾರೆ. ಎರಡು ಹುಲಿ ಉಗುರು ಪತ್ತೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾದೆ. ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಅಧಿಕಾರಿಗಳ ತಂಡ ಫ್ಲ್ಯಾಟ್ಗೆ ಬಂದು ಎರಡು ಹುಲಿ ಉಗುರು ಸೀಜ್ ಮಾಡಿದ್ದಾರೆ. ಹುಲಿ ಉಗುರಿನ ನೈಜತೆ ಪರೀಕ್ಷೆಗೆ ಮಲ್ಲೇಶ್ವರಂನ ಅರಣ್ಯ ಭವನಕ್ಕೆ ತೆಗೆದುಕೊಂಡು ಹೋದಿದ್ದಾರೆ. ಪರಿಕ್ಷೆ ವೇಳೆ ಅಸಲಿ ಹುಲಿ ಉಗುರು ಎಂಬುದು ಸಾಬೀತಾದರೆ ಬಸವರಾಜ್ ಮಾಗಿಗೆ ಮತ್ತಷ್ಟು ಸಂಕಷ್ಟ ಸಾಧ್ಯತೆ ಇದೆ.
ಜೈಲುಪಾಲಾಗಿದ್ದ ಬಿಬಿಎಂಪಿ ಅಧಿಕಾರಿ: ಬಸವರಾಜ್ ಮಾಗಿ ಒಂದೂವರೆ ತಿಂಗಳ ಹಿಂದೆ ಜೈಲಿಂದ ಹೊರಗಡೆ ಆಗಿ ಬಂದಿದ್ದರು. ನಕಲಿ ದಾಖಲಾತಿ ಸೃಷ್ಟಿಸಿದ ಕೇಸ್ನಲ್ಲಿ ಜೈಲುಪಾಲಾಗಿದ್ದು, ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ.
ಕಲಬುರಗಿಯಲ್ಲಿ ಕೋಟಿ ಮೌಲ್ಯದ ಮನೆ
ಬೆಂಗಳೂರಿನಲ್ಲಿ 5 ಕಡೆ, ಕಲಬುರಗಿಯಲ್ಲಿ 4 ಕಡೆ ಹೀಗೆ ಬಸವರಾಜ ಮಾಗಿಗೆ ಸಂಬಂಧಿಸಿದಂತೆ ಒಟ್ಟು 9 ಕಡೆ ಲೋಕಾ ದಾಳಿ ಮಾಡಿದೆ. ಕಲಬುರಗಿಯ ಬಡೇಪುರ, ಪಿ&ಟಿ ಕಾಲೋನಿ, ಪಾಳಾ ಗ್ರಾಮದ ಮನೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗಿದೆ.
ಸರ್ಕಾರಿ ಸೇವೆಗೆ ಸೇರಿದ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಆಸ್ತಿ ಸಂಗ್ರಹ ಮಾಡಿದ್ದಾರೆ. ನಕಲಿ ದಾಖಲಾತಿ ಸೃಷ್ಟಿ ಆರೋಪದಲ್ಲಿ ಹಿಂದೆ ಬಿಬಿಎಂಪಿಯಿಂದ ಅಮಾನತು ಮಾಡಲಾಗಿತ್ತು. ತಾಯಿ ಹೆಸರಲ್ಲಿ ಸುಮಾರು 50 ಎಕರೆಯ ಕೋಟಿ ಕೋಟಿ ಬೆಲೆ ಬಾಳುವ ಜಮೀನು ಖರೀದಿ ಮಾಡಿದ್ದರು. ಕಲಬುರಗಿಯಲ್ಲಿ ಕೋಟಿ ಮೌಲ್ಯದ 4 ಅಂತಸ್ತಿನ ಮನೆ ಅಲ್ಲದೇ ಇನ್ನೂ ಹಲವು ಕಡೆ ಆಸ್ತಿ ಹೊಂದಿದ್ದಾರೆ.
ವೈದ್ಯರು ಇನ್ನು 6 ತಿಂಗಳು ಇದ್ರೆ ಹೆಚ್ಚು ಅಂದಿದ್ರು, ಛಲಗಾತಿ ಒಂದೂವರೆ ವರ್ಷ ಹೋರಾಡಿದಳು


