ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಅವರ ಸ್ವಗ್ರಾಮ, ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಾಏಕಿ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ಮಹದೇವಪುರ ವಿಭಾಗದ ಸಹಾಯಕ ಆಯುಕ್ತರಾಗಿರುವ ಬಸವರಾಜ ಕಲಬುರಗಿ ಪಾಳಾ ಗ್ರಾಮದವರು.
ಕಲಬುರಗಿ ಲೋಕಾಯುಕ್ತ ಎಸ್.ಪಿ .ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ಹನುಮಂತ್ ಅವರಿದ್ದ ತಂಡ ಕಲಬುರಗಿ ನಗರ ಮತ್ತು ಪಾಳಾದಲ್ಲಿನ ಮನೆಗಳ ಮೇಲೆ ದಾಳಿ ಮಾಡಿ, ಕಡತಗಳ ಪರಿಶೀಲಿಸುತ್ತಿದೆ.
ವರುಣ ಜಲಾಶಯದ ಅಧೀಕ್ಷಕ ಎಂಜಿನಿಯರ್ ಮನೆ ಮೇಲೆ ದಾಳಿ
ಮೈಸೂರು: ಅಕ್ರಮ ಅಸ್ತಿ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಕಬಿನಿ ಮತ್ತು ವರುಣ ಜಲಾಶಯದ ಅಧೀಕ್ಷಕ ಎಂಜಿನಿಯರ್ ಮಹೇಶ್ ಮನೆ ಮೇಲೆ ಕೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಚಾಮುಂಡಿ ಬೆಟ್ಟದ ರಸ್ತೆಯ ಕೆಂಪ ಚಲುವಮ್ಮಣಿ ನಗರದಲ್ಲಿರುವ ಮಹೇಶ್ ಮನೆಯಲ್ಲಿ ಬೆಳಗ್ಗಿನಿಂದ ಶೋಧ ಕಾರ್ಯ ನಡೆಯುತ್ತಿದೆ.
ಲೋಕಾಯುಕ್ತ ಪೊಲೀಸ್ ಮಹಾ ನಿರ್ದೇಶಕ (DGP) ಪ್ರಶಾಂತ್ ಕುಮಾರ್ ಟಾಗೋರ್, ಪೊಲೀಸ್ ಮಹಾ ನಿರೀಕ್ಷಕ (IGP ) ಸುಬ್ರಮಣ್ಯೇಶ್ವರ ರಾವ್, ಮೈಸೂರು ಪ್ರಭಾರ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಚರಣೆಯಲ್ಲಿ ಮೈಸೂರು ಲೋಕಾಯುಕ್ತ ಡಿವೈಎಸ್’ಪಿ ವಿ. ಕೃಷ್ಣಯ್ಯ, ಇನ್ಸ್ಪೆಕ್ಟರ್ ಗಳಾದ ರವಿ ಕುಮಾರ್, ಜಯರತ್ನ, ಲೋಕೇಶ್ ಹಾಗೂ ಸಿಬ್ಬಂದಿ ವೀರಭದ್ರ ಸ್ವಾಮಿ, ಪ್ರಕಾಶ್, ಗೋಪಿ, ತ್ರಿವೇಣಿ, ಮೋಹನ್ ಗೌಡ, ಮೋಹನ್ ಕುಮಾರ್, ದಿನೇಶ್, ಸುಂದ್ರೇಶ್ ಪಾಲ್ಗೊಂಡಿದ್ದಾರೆ.
ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಸಮಿತಿ ರಚನೆ, ಮಾಜಿ ಮೇಯರ್ಗಳಿಗೆ ಹೊಣೆ
ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾ ಶಾಕ್: ಬೆಂಗಳೂರು ಸೇರಿ ರಾಜ್ಯಾದ್ಯಂತ ಏಕಕಾಲದಲ್ಲಿ 56 ಕಡೆ ದಾಳಿ


