BBMP
Loading ...

BBMP Election

ಬೆಂಗಳೂರು: ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಅಗತ್ಯವಾದ ಪೂರ್ವ ಸಿದ್ಧತೆ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೆಪಿಸಿಸಿಯು ಮಾಜಿ ಮೇಯರ್‌ಗಳ ನೇತೃತ್ವದಲ್ಲಿ ಐದು ಸಮಿತಿ ರಚಿಸಿದೆ.

ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಘಟಕದ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಲು ಜೆ.ಹುಚ್ಚಪ್ಪ, ಬೆಂಗಳೂರು ಪಶ್ಚಿಮ ಡಿಸಿಸಿ ವ್ಯಾಪ್ತಿಗೆ ಸಂಪತ್ ರಾಜ್ ಹಾಗೂ ಬೆಂಗಳೂರು ಉತ್ತರ ಡಿಸಿಸಿಗೆ ಪಿ.ಆರ್.ರಮೇಶ್, ಬೆಂಗಳೂರು ದಕ್ಷಿಣ ಡಿಸಿಸಿಗೆ ಎಂ.ರಾಮಚಂದ್ರಪ್ಪ, ಬೆಂಗಳೂರು ಕೇಂದ್ರ ಡಿಸಿಸಿಗೆ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಈ ಸಮಿತಿಗಳು ಸಂಬಂಧಪಟ್ಟ ಸಚಿವರು, ಸಂಸದರು, ಶಾಸಕರು, ಡಿಸಿಸಿ ಅಧ್ಯಕ್ಷರು, ಶಾಸಕರು, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು, ಇತರೆ ಹಿರಿಯ ಮುಖಂಡರನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚೆ ನಡೆಸಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸಲು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

ದರ್ಶನ್​ಗೆ ಮನೆ ಊಟಕ್ಕೆ ಅನುಮತಿ ಕೊಟ್ಟರೂ ಬೇಕಾಬಿಟ್ಟಿ ಬಿರಿಯಾನಿ ತಿನ್ನೋ ಹಾಗಿಲ್ಲ: ಇಲ್ಲಿದೆ ರೂಲ್ಸ್ ವಿವರ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಸೇರಿ 9 ಮಂದಿ ವಿರುದ್ಧ ದೂರು ದಾಖಲು

Leave a Reply

Your email address will not be published. Required fields are marked *