BBMP
Loading ...

Minor Boy

ಬೆಂಗಳೂರು: ನನ್ನನ್ನು ಕ್ಷಮಿಸಿ ಅಂತ ಡೆತ್‌ ನೋಟ್‌ ಬರೆದಿಟ್ಟು 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗಂಧಾರ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕ ರಾತ್ರಿ ಊಟ ಮಾಡಿ ಸಹಜವಾಗಿಯೇ ರೂಮ್‌ನಲ್ಲಿ ಮಲಗಿದ್ದಾನೆ. ಬೆಳಗ್ಗೆ ತಂದೆ ರೂಮ್‌ ಬಾಗಿಲು ತೆರೆದಾಗ ಆತ್ಮಹತ್ಯೆ ಶರಣಾಗಿರೋದು ಕಂಡುಬಂದಿದೆ. Forgive Me (ನನ್ನನ್ನು ಕ್ಷಮಿಸಿ) ಅಂತ ಡೆತ್ ನೋಟ್ ಬರೆದಿಟ್ಟು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಲಕನ ತಂದೆ ಗಣೇಶ್ ಪ್ರಸಾದ್ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ

Leave a Reply

Your email address will not be published. Required fields are marked *