BBMP
Loading ...

kannadaprabha_2026-04-15_nto2lawv_vinay-kulkarni

Greater Bengaluru News9 : ಧಾರವಾಡ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಅವರನ್ನು ಕೋರ್ಟ್‌ನಲ್ಲೇ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.

ನಾಳೆ (ಏಪ್ರಿಲ್ 16) ಶಿಕ್ಷೆಯ ಪ್ರಮಾಣ ಕುರಿತು ನ್ಯಾಯಾಲಯದಲ್ಲಿ ವಾದ ನಡೆಯಲಿದ್ದು, ಬಳಿಕ ಶಿಕ್ಷೆ ಪ್ರಕಟವಾಗಲಿದೆ. ಕೊಲೆ ಹಾಗೂ ಒಳಸಂಚು ಆರೋಪ ಸಾಬೀತಾದ ಹಿನ್ನೆಲೆ ಕನಿಷ್ಠ ಜೀವಾವಧಿ ಶಿಕ್ಷೆಯಿಂದ ಗರಿಷ್ಠ ಮರಣದಂಡನೆವರೆಗೆ ವಿಧಿಸುವ ಅವಕಾಶವಿದೆ.

ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಿದರೆ ಶಾಸಕ ಸ್ಥಾನ ರದ್ದಾಗುವ ನಿಯಮ ಇರುವುದರಿಂದ ವಿನಯ್ ಕುಲಕರ್ಣಿ ಅವರ ಸ್ಥಾನಕ್ಕೆ ಸಂಕಷ್ಟ ಎದುರಾಗಿದೆ.

ಮುಂದಿನ ಹಂತದಲ್ಲಿ ಅವರು ಮೇಲ್ಮನವಿ ಸಲ್ಲಿಸಿ ಜಾಮೀನು ಅಥವಾ ತೀರ್ಪಿಗೆ ತಡೆ ಕೋರುವ ಅವಕಾಶವಿದೆ. ತಡೆ ಸಿಕ್ಕರೆ ಮಾತ್ರ ಸ್ಥಾನ ಉಳಿಯಬಹುದು, ಇಲ್ಲದಿದ್ದರೆ ಜೈಲು ಶಿಕ್ಷೆಯ ಜೊತೆಗೆ ಶಾಸಕ ಸ್ಥಾನವೂ ಕಳೆದುಕೊಳ್ಳುವ ಸಾಧ್ಯತೆ ಇದೆ.

ಈ ಪ್ರಕರಣ 2016ರಲ್ಲಿ ಧಾರವಾಡದ ಜಿಮ್‌ನಲ್ಲಿ ನಡೆದ Yogesh Gowda ಹತ್ಯೆಗೆ ಸಂಬಂಧಿಸಿದೆ. ಸಿಬಿಐ ತನಿಖೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು ಆರೋಪಿಯಾಗಿ ಗುರುತಿಸಲಾಗಿತ್ತು.

Leave a Reply

Your email address will not be published. Required fields are marked *