BBMP
Loading ...

Khata

Greater Bengaluru News9 : ಕಟ್ಟಡದ ಖಾತಾ ಮಾಡಿಕೊಡಲು 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಥಣಿಸಂದ್ರ ವಾರ್ಡ್‌ ಜಿಬಿಎ ರೆವೆನ್ಯೂ ಇನ್‌ಸ್ಪೆಕ್ಟರ್ ಹಾಗೂ ತೆರಿಗೆ ನಿರೀಕ್ಷಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಥಣಿಸಂದ್ರ ವಾರ್ಡ್‌ನ ಜಿಬಿಎ ಆರ್‌ಐ ವೆಂಕಟೇಶ್, ಇದೇ ವಾರ್ಡನ ಜಿಬಿಎ ನಿರೀಕ್ಷಕ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದವರು. ಹೆಗಡೆ ನಗರದ ನ್ಯಾಮತುಲ್ಲಾ ಖಾನ್ ಎಂಬುವವರು ದೂರುದಾರರು. ನ್ಯಾಮತುಲ್ಲಾ ಖಾನ್ ಅವರಿಗೆ ಸೇರಿದ ಕಟ್ಟಡದ ಖಾತಾ ಕೆಲಸ ಮಾಡಿಕೊಡುವ ಸಂಬಂಧ ಆರೋಪಿಗಳು 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ದೂರುದಾರರಿಂದ ಆರೋಪಿಗಳು ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *